School History

ನಮ್ಮ ಶಾಲೆ ಬೆಳೆದು ಬಂದ ದಾರಿ



ಒಂದೊಂದು ಸಂಸ್ಥೆಗೂ ಒಂದೊಂದು ಇತಿಹಾಸವಿರುವಂತೆ ಸರಕಾರಿ ಎಲ್ ಪಿ ಶಾಲೆ ಮುಳಿಂಜ,ಈ ಸಂಸ್ಥೆಗೂ
ಒಂದು ಇತಿಹಾಸವಿದೆ.
ಎಲ್ಲಾ ಕಡೆ ನಿರುದ್ಯೋಗಿಗಳೇ ತುಂಬಿಕೊಂಡಿರುವಾಗ ಕೇರಳ ಸರಕಾರ ಒಂದು employment scheme ಪ್ರಾರಂಬಿಸಿತು.scheme ನ ಸಾಧನೆಯೇ ಈ ಶಾಲೆಯ ಸಾಧನೆ.ಮುಳಿಂಜವೆಂಬ ಎಲ್.ಪಿ.ಶಾಲೆ ಮೊದಲು ಏಕೋಪಾಧ್ಯಾಯ ಶಾಲೆಯಾಗಿ ೧೯೫೩ ರಲ್ಲಿ ಪ್ರಾರಂಭವಾಯಿತು.ಈಗಿನ ಉಪ್ಪಳ ಬಸ್ ಸ್ಟಾಂಡ್ ನ ಹತ್ತಿರ ಎಸ್ ಬಿ ಐ ಬ್ಯಾಂಕಿನ ಕಟ್ಟಡದ ಕೆಳಗೆ ಮುಳಿಯ ತಾರಸಿನ ಎರಡು ಭಾಗಗಳಲ್ಲಿನ ಒಂದು ಇದಗಾಗಿತ್ತು.ಮತ್ತೊಂದು ಉಪ್ಪಳ ಶಾಲೆಯಾಗಿತ್ತು.ಈ ಕಟ್ಟಡಕ್ಕೆ ತಿಂಗಳಿಗೆ ೩೩ ರೂ ಬಾಡಿಗೆ ನೀಡಲಾಗಿತ್ತಿತ್ತು.ಕನ್ನಡ ಮಾಧ್ಯಮ ಶಾಲೆಯಾಗಿ ಪ್ರಾರಂಭಗೊಂಡು ಬಿ.ಎ೦.ನಾರಾಯಣ ಬಂಗ್ರ ಮಂಜೇಶ್ವರ ಮೊದಲ ಮುಖ್ಯೋಪಾಧ್ಯಾಯರಾಗಿದ್ದರು.ನಂತರ ಕೆಲವು ವರ್ಷಗಳನಂತರ ೪ ಅಧ್ಯಾಪಕರು ಕೆಲಸ ಮಾಡ ತೊಡಗಿದರು...೧೯೫೦ ರಿಂದ ಏಕೋಪಾಧ್ಯಾಯ ಶಾಲೆ
ಬದಲಾಯಿತು.ಆಗ ಇಲ್ಲಿ ಮೆಡ್ರಾಸ್ ಸಂಸ್ಥಾನದ ಆಡಳಿತವಾಗಿತ್ತು. ಬಿ.ಎ೦.ನಾರಾಯಣ ರವರು
ವರ್ಗಾವಣೆಯಾಗಿ ಶ್ರೀ ಶಂಕರ ನಾರಾಯಣ ಹೊಳ್ಳರವರು ಮುಖ್ಯೋಪಾಧ್ಯಾಯರಾಗಿ ಬಂದರು.ಅವರು ಹೋದ ನಂತರ ಮುಖ್ಯೋಪಾಧ್ಯಾಯರಾಗಿ ಬಂದ ಶ್ರೀ.ಎ ಸದಾಶಿವ ಆಳ್ವ ಶಾಲೆಗೆ ಪ್ರತ್ಯೇಕ ಭೂಮಿ ಸಿಗಲು ಸರಕಾರಕ್ಕೆ ಅರ್ಜಿ ಹಾಕಿ ಶ್ರೀ.ಬಾಲಕೃಷ್ಣರೊಂದಿಗೆ ಮಾತುಕತೆ ಮಾಡಿ,ಸ್ವಂತ ಸ್ಥಳಕ್ಕಾಗಿ ಹೋರಾಡಿದರು.೧೯೬೫ರಲ್ಲಿ ಉಪ್ಪಳ ದಿಂದ ಮುಳಿಂಜಕ್ಕೆ ಶಾಲೆಯು ಸ್ಥಳಾಂತರವಾಯಿತು.
ಇವರ ವರ್ಗಾವಣೆಯ ನಂತರ ಶ್ರೀ ಐತಪ್ಪ ಶೆಟ್ಟಿಯವರು ಮುಖ್ಯೋಪಾಧ್ಯಾಯರಾದರು.ಪುನಃ ೧೯೭೪ ರಲ್ಲಿ ಎ.ಎಸ್ ಆಳ್ವರು ಇಲ್ಲಿಗೆ ಬಂದಾಗ ಶಾಲೆಯ ಸ್ಥಳಕ್ಕಾಗಿ ಹಾಕಿದ ಅರ್ಜಿ ಪಾಸಾಗಿ ಶಾಲೆಗೆಂದು ೨ ಎಕರೆ ಸ್ಥಳ ಪಾಸಾಯಿತು.ಮೊದಲು ಕಟ್ಟಡ Block Panchayath Fund school committee fund ಸೇರಿಸಿ ಕಟ್ಟಿದ್ದು ನಂತರದ ಗೇಟಿನ ಹತ್ತಿರದ ಕಟ್ಟಡವನ್ನು Operation Block Board ನ ಸಮಯದಲ್ಲಿ ೧೯೮೮.೮೯ರಲ್ಲಿ ಕಟ್ಟಲಾಯಿತು.ಇಲ್ಲಿ ೨ ಕ್ಲಾಸು ರೂಂಗಳಿದ್ದು ನಂತರ Panchayath ವತಿಯಿಂದ ಒಂದು ಕ್ಲಾಸ್ ರೂಂ ಪಾಸಾಗಿ ,ಪಾಸಾದ ೫೦೦೦ ಸಾಕಾಗದೆ ಆಗ ಪಿ.ಟಿ.ಎ ಪ್ರೆಸಿಡೆಂಟ್ ಆಗಿದ್ದ ಶ್ರೀ ಹರಿಶ್ಚಂದ್ರ ಹೊಳ್ಳ ೨೬ ಸಾವಿರ ಹಣವಿತ್ತು ಆ ಕಟ್ಟಡದ ಕೆಲಸವನ್ನು ಪೂರ್ತಿಕರಿಸಿದರು.ನಂತರ ೨೦೦೪.೦೫ ರಲ್ಲಿ ಎಸ್ ಎಸ್ ವತಿಯಿಂದ ೨ಕ್ಲಾಸು ರೂಂಗಳು ಪಾಸಾಯಿತು.ನಂತರ ೨೦೦೫.೦೬ ರಲ್ಲಿ ಎಸ್ ಎಸ್ ವತಿಯಿಂದ ೨ ಶಾಲೆಗಳ ಕಟ್ಟಡಕ್ಕೆ ಹಣ ಪಾಸಾಗಿ ಕಟ್ಟಡ ನಿರ್ಮಾಣವಾಯಿತು.೨೦೦೯.೧೦ ರಲ್ಲಿ ಶಾಲೆಯ ಮೊದಲ ಕಟ್ಟಡವನ್ನು ಪುನರ್ ನಿರ್ಮಾಣಗೊಳಿಸಿ ದೊಡ್ಡ ಹಾಲ್ ನ್ನಾಗಿ ಮಾಡಲಾಯಿತು.ಅದರಲ್ಲಿ ಒಂದು ಶಾಲೆ ಮತ್ತು ಅಡುಗೆ ಕೋಣೆ ಇರುವುದು.ಅಲ್ಲದೆ ೨೦೦೩.೦೪ ರಲ್ಲಿ ನೀರಿನ ವ್ಯವಸ್ಥೆಗಾಗಿ motor shed ನಿರ್ಮಾಣವಾಯಿತು ಬಾವಿಯು ೧೯೬೫ ರಲ್ಲಿ ನಿರ್ಮಾಣವಾಯಿತು.Block Panchayath ವತಿಯಿಂದ ಶಾಲಾ ground
ನಿರ್ಮಾಣವಾಯಿತು.೨೦೧೨.೧೩ರಲ್ಲಿ ಎಸ್ ಎಸ್ ಎ ವತಿಯಿಂದ ಎಚ್ ಎಮ್ ರೂಂ ಪಾಸಾಯಿತು.ಇದು ೧೮.೦೪.೨೦೧೩ ರಂದು ಉದ್ಘಾಟನೆಗೊಂಡಿತು.ಈಗ ಶಾಲೆಯಲ್ಲಿ ಒಟ್ಟು ೮ ಕ್ಲಾಸ್ ರೂಂ ಗಳಲ್ಲಿ ಆಫೀಸ್ ರೂಂ ಇರುವುದು.ಟೈಲ್ ಹಾಕಿದ ೪ ಶೌಚಾಲಯಗಳಿವೆ.ಕ್ಲಾಸ್ ರೂಂ ಗಳಲ್ಲಿ ಒಂದನ್ನು ೬ವರ್ಷಗಳಿಂದ ಬಾಲವಾಡಿಗಾಗಿ ನೀಡಲಾಗಿದೆ.ಕುಡಿಯುವ ನೀರಿಗಾಗಿ ಫಿಲ್ಟರ್ ನ ವ್ಯವಸ್ಥೆಯಿದೆ.ಅಲ್ಲೆ ನಳ್ಳಿಯ ವ್ಯವಸ್ಥೆಯೂ ಇದೆ.ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳು ಇಲ್ಲಿ ಇದೆ.ಶಾಲೆಗೆ compound,gate ಗಳಿರುವುದು.
ಈ ತನಕ ಈ ಶಾಲೆಯಲ್ಲಿ ೧೯ ಮುಖ್ಯೊಪಾಧ್ಯಾಯರು ಕೆಲಸ ಮಾಡಿರುವರು.
. ಶ್ರೀ.ಬಿ.ಎಮ್.ನಾರಾಯಣ
. ಶ್ರೀ.ಶಂಕರ ನಾರಾಯಣ ಹೊಳ್ಳ
.ಶ್ರೀ..ಸದಾಶಿವ ಆಳ್ವ -೧೯೬೨ ರಿಂದ ೧೯೬೯ ರವರೆಗೆ
.ಶ್ರೀ.ಎಮ್.ಪಿ.ಐತಪ್ಪ ಶೆಟ್ಟಿ -ಆಗಸ್ಟ್ ೧೯೬೯ ರಿಂದ 22-01-1972ರವರೆಗೆ
. ಶ್ರೀ.ಹಮೀದ್
. ಶ್ರೀ.ಕೆ.ಹಮೀದ್
.ಶ್ರೀ.ಕೆ.ಮೊಯಿದ್ದೀನ್ ಕುಂಞ-೨೨.೦೧.೧೯೭೨ರವರೆಗೆ
. ಶ್ರೀ.ಸದಾಶಿವ ಆಳ್ವ-೧೯೭೪
.ಶ್ರೀ.ಎಮ್.ಪಿ.ಐತಪ್ಪ ಶೆಟ್ಟಿ -ಅಕ್ಟೋಬರ್ ೧೯೮೨ ರಿಂದ ೧೯೮೭ ರವರೆಗೆ
೧೦. ಶ್ರೀ .ಮಹಾಬಲ ಶೆಟ್ಟಿ ನವೆಂಬರ್ ೧೯೮೭ ರಿಂದ ಜೂನ್ ೧೨ ೧೯೮೯
೧೧.ಶ್ರೀ.ಎಮ್.ಶಾಂತ ಭಂಡಾರಿ ಜೂನ್ ೧೪ ೧೯೮೯ ರಿಂದ ಮಾರ್ಚ್ ೧೯೯೧ರವರೆಗೆ
೧೨.ಶ್ರೀ.ಕೆ ಅಮ್ಮಣಿ ಜುಲೈ ೧೯೯೧ ರಿಂದ ಮಾರ್ಚ್ ೧೯೯೩ರವರೆಗೆ
೧೩. ಶ್ರೀ.ಚಂದ್ರಹಾಸ್ ಜುಲೈ ೧೯೯೩ ರಿಂದ ಮಾರ್ಚ್ ೧೯೯೬ರವರೆಗೆ
೧೪. ಶ್ರೀ.ವಿ ರತ್ನಾಕರ್ ನಾಯಕ್ ಜುಲೈ ೧೯೯೯ ರಿಂದ ಮಾರ್ಚ್ ೨೦೦೧ರವರೆಗೆ
೧೫.ಚಂದ ಸಿ ಎಚ್ ಜುಲೈ ೨೦೦೧ ರಿಂದ ಎಪ್ರಿಲ್ ೨೦೦೩ರವರೆಗೆ
೧೬.ಶ್ರೀ ಎ ಮಾಧವ ಕೆ ಜೂನ್ ೨೦೦೩ ರಿಂದ ೨೦೦೫ರವರೆಗೆ
೧೭.ಶ್ರೀ ಶಂಕರ ಎ-ಜುಲೈ ೨೦೦೫ ರಿಂದ ೨೦೦೭ರವರೆಗೆ
೧೮.ಶ್ರೀರಾಧಾಕೃಷ್ಣ ಕೆ೨೦೦೭ ರಿಂದ ಎಪ್ರಿಲ್ ೩೦ ೨೦೧೩ರವರೆಗೆ
೧೯.ಶ್ರೀ ಪ್ರಕಾಶ್ ಜೆ.ಬಿ ನವೆಂಬರ್ -೨೦೧೩ ರಿಂದ ಜೂನ್ ೨೦೧೪ರವರೆಗೆ
ಪ್ರಸ್ತುತ ೧೯ ನೇ ಮುಖ್ಯೋಪಾಧ್ಯಾಯರಾಗಿ ಶ್ರೀ ಪ್ರಕಾಶ್ ಜೆ.ಬಿ ಯವರು ನವೆಂಬರ್ ೨೯/ ೨೦೧೩ ರಿಂದ ಕಾರ್ಯ ನಿರ್ವಹಿಸಿ ಜುಲೈ //೨೦೧೪ ಕ್ಕೆ ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋದರು.
ಈ ಎಲ್ಲಾ ಮುಖ್ಯೋಪಾಧ್ಯಾಯರುಗಳ ಸಮಯದಲ್ಲಿ ಹಲವು ಪುರೋಗತಿಗಳು ನಡೆದಿರುವುದು.೨೦೦೭.೨೦೧೩ ರ ಕಾಲಾವಧಿ ಈ ಶಾಲೆಯ ಪರಿಪೂರ್ಣ ಕಾಲವೆಂದು ಹೇಳ ಬಹುದು.
ಶಾಲೆಯಲ್ಲಿರುವ ಇತರ ಸೌಕರ್ಯಗಳು
. ವಾಹನ ಸೌಕರ್ಯ : ಮಕ್ಕಳ ಪ್ರಯಾಣ ಸೌಕರ್ಯಕ್ಕಾಗಿ ರಿಕ್ಷಾ ಸೌಕರ್ಯ ಒದಗಿಸಲಾಗಿದೆ.ಇದರ ವೆಚ್ಚದ
¾ ಅಂಶವನ್ನು ಅಧ್ಯಾಪಕರು ವಹಿಸುವರು.
. ಕಂಪ್ಯೂಟರ್ ತರಬೇತಿ : 1ರಿಂದ 4ರ ವರೆಗಿನ ಎಲ್ಲಾ ಮಕ್ಕಳಿಗೂ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುವುದು.
. ವಾರ್ಷಿಕೋತ್ಸವ :ಪ್ರತಿ ವರ್ಷವೂ ವಿಜೃಂಭಣೆಯಿಂದ ಎಲ್ಲಾ ಮಕ್ಕಳು ಭಾಗವಹಿಸುವಂತೆ ವಾರ್ಷಿಕೋತ್ಸವ ನಡೆಸಲಾಗುವುದು.ಅಲ್ಲದೆ ಓಣಂ ಕ್ರಿಸ್ ಮಸ್ ಮುಂತಾದ ಹಬ್ಬಗಳನ್ನು ಆಚರಿಸಲಾಗುವುದು.
. ಕೊಡೆ ಬ್ಯಾಗ್ ವಿತರಣೆ :ಹೊಸತಾಗಿ ದಾಖಲಾದ ಎಲ್ಲಾ ಮಕ್ಕಳಿಗೂ ಅಧ್ಯಾಪಕರ ವತಿಯಿಂದ ಕಳೆದ 5 ವರ್ಷಗಳಿಂದ ಕೊಡೆ ಬ್ಯಾಗ್ ಮತ್ತು ಸಮವಸ್ತ್ರ ವಿತರಿಸಲಾಗುತ್ತಿದೆ.
.
ಪ್ರಸ್ತುತ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು
ಅಧ್ಯಾಪಕರು ಶ್ರೀಮತಿ ರೇಣುಕಾ.ಕೆ In charge
ಶ್ರೀಮತಿ ಪುಷ್ಪಲತ
ಶ್ರೀಮತಿ ಶ್ರುತಿ
ಶ್ರೀಮತಿ ಬುಶ್ರಾ
ಶ್ರೀ ಇಸಾಕ್
ಶ್ರೀಮತಿ ಲಕ್ಷ್ಮಿ ಪಿ ಟಿ ಸಿ ಎಮ್
ಶ್ರೀಮತಿ ಕಲ್ಯಾಣಿ ಅಡುಗೆ

No comments:

Post a Comment